ಅರೀಢಕ ಸಂಧಿದೇಹಿಗಳು : ಬ್ರಾಕಿಯೋಪೊಡ ವಂಶದ ಒಂದು ಉಪವರ್ಗ.
ಪಾರ್ಶ್ವಸಮಸೌಷ್ಠವಸ್ತುಳ್ಳ ಚಿಪ್ಪಿರುವ ಸಮುದ್ರ್ರ ಜೀವಿಗಳು (ಆರ್ಟಿಕ್ಯುಲೇಟ). ಈಗ ಜೀವಿಸಿರುವ
ಬ್ರಾಕಿಯೋಪೊಡಗಳಲ್ಲಿ ಹೆಚ್ಚು ಪ್ರಾಣಿಗಳು ಈ ವರ್ಗಕ್ಕೆ ಸೇರಿವೆ. ಇವುಗಳಿಗೆ ಸುಣ್ಣದಿಂದಾದ
ಎರಡು ಚಿಪ್ಪುಗಳಿವೆ. ಒಂದರಂತೆ ಮತ್ತೊಂದಿಲ್ಲ. ತಮ್ಮ ಹಿಂಬದಿಯಲ್ಲಿ ಕುಳಿ ಮತ್ತು
ಹಲ್ಲುಗಳಿಂದ ಒಂದಕ್ಕೊಂದು ಕಚ್ಚಿಕೊಳ್ಳುವಂತಿವೆ. ಆರ್ಟಿಕ್ಯುಲೇಟದಲ್ಲಿ ಬ್ರೆಕೀಡಿಯಂ
ಎಂಬ ದೃಢತೆಯಿಂದಾಗುವ ಆಂತರಿಕ ಪಂಜರ ಇದೆ. ಕೆಲವಕ್ಕೆ ತೊಟ್ಟು ಉಂಟು. ಈ
ತೊಟ್ಟು ಹೊರಗೆ ಬರಲು ಕೆಳಗಿನ ಚಿಪ್ಪಿನಲ್ಲಿ ಒಂದು ರಂಧ್ರವಿದೆ. ಇದರಲ್ಲಿನ ಬಿಳಂಗಿ
(ಮ್ಯಾಂಟಲ್) ರೂಪಪರಿವರ್ತನೆಯ ಕಾಲದಲ್ಲಿ ತಿರುಗು ಮುರುಗಾಗುವುದು. ಈ ಪ್ರಾಣಿಗಳು
ಸಮುದ್ರದಲ್ಲಿ ಉಬ್ಬರವಿಳಿತದ ಜಾಗದಿಂದ ಹಿಡಿದು ಅತಿ ಆಳದವರೆಗೆ ಸಮುದ್ರ್ರ ತಳದಲ್ಲಿನ
ಪ್ರಾಣಿ, ವಸ್ತುಗಳಿಗೆ ಕಚ್ಚಿಕೊಂಡಿರುತ್ತವೆ.  ಮ್ಯೂರ್‍ವುಡ್‍ನ ಪ್ರಕಾರ ಇರುವ 25 ಕುಟುಂಬಗಳಲ್ಲಿ
21 ಈಗ ಅಳಿದು ಹೋಗಿವೆ.
(ಸಿ.ಎಂ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ